ಕನಕದಾಸರ ಸಾಹಿತ್ಯ, ಜೀವನ ಮತ್ತು ಸಂದೇಶಗಳ ಕುರಿತು ಅನನ್ಯ ಸೇವೆ ಸಲ್ಲಿಸಿದವರನ್ನು ಗೌರವಿಸಲು ಕರ್ನಾಟಕ ಸರ್ಕಾರವು 2008ರಿಂದ ಕನಕಶ್ರೀ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಕನಕದಾಸರ ಕಂಚಿನ ಪುತ್ಥಳಿ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.